ಸಿಂಹರಾಶಿ
	ಉತ್ತರ ಖಗೋಳಾರ್ಧದಲ್ಲಿ ಎದ್ದು ಕಾಣುವ ಒಂದು ನಕ್ಷತ್ರ ಪುಂಜ; ಸೂರ್ಯನ ವಾರ್ಷಿಕ ಗೋಚರ ಪರಿಭ್ರಮಣೆಯಲ್ಲಿ ಗುರುತಿಸಲಾಗಿರುವ ದ್ವಾದಶರಾಶಿಗಳ ಪೈಕಿ ಐದನೆಯದು. ವಿಷುವದಂಶ 9 ಗಂ. 20ಮಿ. - 11 ಗಂ. 55ಮಿ. ಘಂಟಾವೃತ್ತಾಂಶ - 6º-33º ದ. ಈ ದ್ವಾದಶರಾಶಿಗಳ ಪೈಕಿ ಐದನೆಯದು. ಈ ರಾಶಿಯ ಉತ್ತರಕ್ಕೆ ಅರ್ಸ ಮೇಜರ್ (ಸಪ್ತರ್ಷಿ ಮಂಡಲ) ಪುಂಜ, ದಕ್ಷಿಣಕ್ಕೆ ಸೆಕ್ಸ್‍ಟೆನ್ಸ್ (ಷಷ್ಠಕ) ಮತ್ತು ಕ್ರೇಟರ್ (ಕಂದರ) ಪುಂಜಗಳು. ಪೂರ್ವಕ್ಕೆ ಕೋಮ ಬೆರಿನೈಸೀಸ್ (ಕೃಷ್ಣವೇಣಿ) ಮತ್ತು ವಿರ್ಗೋ (ಕನ್ಯಾರಾಶಿ) ಪುಂಜಗಳೂ ಇವೆ.

	ಈ ರಾಶಿಯ ಪ್ರಮುಖ ತಾರೆ ಮಘಾ (ಚಿ ಲಿಯೋನಿಸ್; ರೆಗ್ಯುಲಸ್). ಇದು ಕ್ರಾಂತಿವೃತ್ತದ ಮೇಲಿದೆ. ಇದೊಂದು ಅನುಪಮ ತಾರೆ (ನೋಡಿ-ಮಖಾ ನಕ್ಷತ್ರ). ಈ ರಾಶಿಯ ಮತ್ತೊಂದು ಪ್ರಮುಖತಾರೆ ¡ ಲಿಯೋನಿಸ್ (ಆಲ್ಜೀಬ). ಇದು ಏಔ ಪ್ರರೂಪದ್ದು. ಕಾಂತಿಮಾನ 1.99. ಸೂರ್ಯನಿಂದ ಸು. 200 ಜ್ಯೋತಿರ್ವರ್ಷ ದೂರದಲ್ಲಿದೆ. b ಲಿಯೋನಿಸ್ (ಡೆನಿಬೋಲ) ತಾರೆ (ಉತ್ತರಾ ನಕ್ಷತ್ರ) ಸೂರ್ಯನಿಂದ ಸುಮಾರು 43 ಜ್ಯೋತಿರ್ವರ್ಷ ದೂರದಲ್ಲಿದೆ. ಂ3 ಪ್ರರೂಪದ್ದು. ಕಾಂತಿಮಾನ 2.14. ಈ ರಾಶಿಯ ಅತ್ಯಂತ ಉಜ್ಜ್ವಲತಾರೆ ್ಗ ಲಿಯೋನಿಸ್. ಅಸಾಡ್ ಆಸ್ಟ್ರಲಿಸ್ ಎಂದು ಹೆಸರು. ಇದು ಉಔ ಪ್ರರೂಪದ್ದು. ಕಾಂತಿಮಾನ 2.99. ಇದು ಸೂರ್ಯನಿಂದ 340 ಬೆಳಕುವರ್ಷಗಳ ದೂರದಲ್ಲಿದೆ. ಸಿಂಹರಾಶಿಯಲ್ಲಿ ಬ್ರಹ್ಮಾಂಡೀಯ ತಲದ ಮೇಲೆ ಅನೇಕ ಬಾಹ್ಯ ಬ್ರಹ್ಮಾಂಡಗಳು ಇವೆ.

	ಸಿಂಹರಾಶಿಯ ಮುನ್ನೆಲೆಯಲ್ಲಿ ಟೆಂಪಲ್ ಎಂಬ ಧೂಮಕೇತುವಿಗೆ ಸಂಬಂಧಿಸಿದ ಲಿಯೋನಿಡ್ಸ್ ಎಂಬ ಉಲ್ಕಾವೃಷ್ಟಿಯ ವಿದ್ಯಮಾನ 33 ವರ್ಷಗಳಿಗೊಮ್ಮೆ ಘಟಿಸುತ್ತದೆ. 1799, 1833 ಮತ್ತು 1866ರ ಉಲ್ಕಾವೃಷ್ಟಿಗಳು ಗಮನಾರ್ಹ. 1999ರಲ್ಲಿ ಘಟಿಸಿದ ಲಿಯೋನಿಡ್ಸ್ ಉಲ್ಕಾವೃಷ್ಟಿ ಖಗೋಳವಿe್ಞÁನಿಗಳ ಗಮನವನ್ನು ಬಹಳವಾಗಿ ಸೆಳೆದಿತ್ತು. 

	ಲಘುಸಿಂಹಪುಂಜ : ಹದಿನೇಳನೆಯ ಶತಮಾನದಲ್ಲಿ ಹಿವೀಲಿಯಸ್ ಎಂಬವ ನಕ್ಷತ್ರ ಪುಂಜಗಳ ಸಾಲಿಗೆ ಈ ಪುಂಜವನ್ನು ಸೇರಿಸಿದ (ಲಿಯೋ ಮೈನರ್). ಈ ಪುಂಜ ಸಿಂಹರಾಶಿಯ ಉತ್ತರ ಶಿರೋಭಾಗಕ್ಕೆ ಅಂಟಿಕೊಂಡಂತೆ ಇದೆ. ವಿಷುವದಂಶ 11ಗಂ. 5ಮಿ., ಘಂಟಾವೃತ್ತಾಂಶ 23º -42ºದ. ಪುಂಜದ ಸನಿಹದಲ್ಲಿ ಸಪ್ತರ್ಷಿ ಮಂಡಲ ಲಿಂಕ್ಸ್ (ಮಾರ್ಜಾಲ) ಮತ್ತು ಲಿಯೋ (ಸಿಂಹರಾಶಿ) ಪುಂಜಗಳಿವೆ. 4ನೆಯ ಕಾಂತಿಮಾನದ ತಾರೆ ಈ b ರಾಶಿಯ ಇನ್ನಿತರ ನಕ್ಷತ್ರಗಳ ಪೈಕಿ ಒಂದು. 	
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ